Tuesday, November 26, 2024

Santānchā hā sangha / संतांचा हा संघ लिहवी अभंग

संतांचा हा संघ लिहवी अभंग














संतांचा हा संघ लिहवी अभंग । स्वये पांडुरंग भजनात दंग ।।
किती गात मन ऐकती हे कान । उकलून ज्ञान देई कोण ।। 
अमृताची चव कैवल्यानुभव । तेजाचा प्रभाव तोची देव ।।
जसा जीवा श्वास चंद्र चकोरास । तैसी त्याची आस लागली मनास ।।

English Lyrics

Santānchā hā sangha lihavi abhanga

Santānchā hā sangha lihavi abhanga । Svaye Pāṇḍuraṅga bhajanāt danga।।
Kitī gāta mana aikatī he kāna । Ukalūn jñāna deī koṇa।।
Amr̥tāchī cava kaivalyānubhava । Tejāchā prabhāva tochī deva।।
Jasā jīvā śvās candra cakōrās । Taisī tyāchī āsa lāgalī manās।।

English Meaning

This assembly of saints is worthy of an eternal hymn; Lord Panduranga Himself is engrossed in their devotion.
As they sing, the heart listens, and the ears are captivated; who else but He can unlock true knowledge?

The taste of nectar is like the experience of ultimate liberation; the radiance of that essence is the true Divine.
Just as breath is essential to life and the moonlight to the chakora bird, so is the longing for Him deeply rooted in the heart.

https://www.youtube.com/watch?v=a_Chw_wF_7w&t=1s

Satata Margadi / ಸತತ ಮಾರ್ಗದಿ

 ಸತತ ಮಾರ್ಗದಿ ಸಂತತ ಸೇವಿಪರಿಗೆ













ಸತತ ಮಾರ್ಗದಿ ಸಂತತ ಸೇವಿಪರಿಗೆ
ಅತಿ ಹಿತದಲಿ ಮನೋ ರಥವ ಕೊಡುವೆ ನೆಂದು ರಥವನ್ನೇರಿದ ರಾಘವೇಂದ್ರ ಸದ್ಗುಣಗಣ ಸಾಂದ್ರ ರಥವನ್ನೇರಿದ ರಾಘವೇಂದ್ರ ಸತತ ಮಾರ್ಗದಿ ಸಂತತ ಸೇವಿಪರಿಗೆ ಸತತ ಮಾರ್ಗದಿ ಸಂತತ ಸೇವಿಪರಿಗೆ ಅತಿ ಹಿತದಲಿ ಮನೋ ರಥವ ಕೊಡುವೆ ನೆಂದು ರಥವನ್ನೇರಿದ ರಾಘವೇಂದ್ರ ಸದ್ಗುಣಗಣ ಸಾಂದ್ರ ರಥವನ್ನೇರಿದ ರಾಘವೇಂದ್ರ ಚತುರ ದಿಕ್ಕು ವಿದಿಕ್ಕುಗಳಲ್ಲಿ ಚರಿಪಾ ಜನರಲ್ಲಿ ಚತುರ ದಿಕ್ಕು ವಿದಿಕ್ಕುಗಳಲ್ಲಿ ಚರಿಪಾ ಜನರಲ್ಲಿ ಮಿತಿ ಇಲ್ಲದೆ ಬಂದೋಲೈಸುತಲಿ ವರವಾ ಬೇಡುತಲಿ ನುತಿಸುತ ಪರಿ ಪರಿ ನತರಾಜಿಹರಿಗೆ ನುತಿಸುತ ಪರಿ ಪರಿ ನತರಾಜಿಹರಿಗೆ ಗತಿ ಪೇಳದೆ ಸರ್ವಾಥನಾ ಬಿಡೆನೆಂದು ರಥವನ್ನೇರಿದ ರಾಘವೇಂದ್ರ ಸದ್ಗುಣಗಣ ಸಾಂದ್ರ ರಥವನ್ನೇರಿದ ರಾಘವೇಂದ್ರ ಸತತ ಮಾರ್ಗದಿ ಸಂತತ ಸೇವಿಪರಿಗೆ ಸತತ ಮಾರ್ಗದಿ ಸಂತತ ಸೇವಿಪರಿಗೆ ಅತಿ ಹಿತದಲಿ ಮನೋ ರಥವ ಕೊಡುವೆ ನೆಂದು ರಥವನ್ನೇರಿದ ರಾಘವೇಂದ್ರ ಸದ್ಗುಣಗಣ ಸಾಂದ್ರ ರಥವನ್ನೇರಿದ ರಾಘವೇಂದ್ರ ಅತುಳ ಮಹಿಮಾನ ದಿನದಲ್ಲಿ ಅತುಳ ಮಹಿಮಾನ ದಿನದಲ್ಲಿ ದ್ವಿತಿಜಾ ವಂಶದಲಿ ಅತುಳ ಮಹಿಮಾನ ದಿನದಲ್ಲಿ ದ್ವಿತಿಜಾ ವಂಶದಲಿ ಉತ್ಪತ್ತಿ ಯಾಗಿ ಉಚಿತದಲ್ಲಿ ಉತ್ತಮ ರೀತಿಯಲ್ಲಿ ಅತಿಶಯ ವಿರುತಿರೆ ಪಿತನ ಬಾಧೆಗಳು ಅತಿಶಯ ವಿರುತಿರೆ ಪಿತನ ಬಾಧೆಗೆ ಮನ್ಮಥ ಪಿತನೊಲಿಸಿದ ಜಿತಕರುಣದಲಿ ರಥವನ್ನೇರಿದ ರಾಘವೇಂದ್ರ ಸದ್ಗುಣಗಣ ಸಾಂದ್ರ ರಥವನ್ನೇರಿದ ರಾಘವೇಂದ್ರ ಸತತ ಮಾರ್ಗದಿ ಸಂತತ ಸೇವಿಪರಿಗೆ ಸತತ ಮಾರ್ಗದಿ ಸಂತತ ಸೇವಿಪರಿಗೆ ಅತಿ ಹಿತದಲಿ ಮನೋ ರಥವ ಕೊಡುವೆ ನೆಂದು ರಥವನ್ನೇರಿದ ರಾಘವೇಂದ್ರ ಸದ್ಗುಣಗಣ ಸಾಂದ್ರ ರಥವನ್ನೇರಿದ ರಾಘವೇಂದ್ರ ಪ್ರಥಮ ಪ್ರಹ್ಲಾದ ವ್ಯಾಸ ಮುನಿಯೇ ಪ್ರಥಮ ಪ್ರಹ್ಲಾದ ವ್ಯಾಸ ಮುನಿಯೇ ಯತಿ ರಾಘವೇಂದ್ರ ಯತಿ ರಾಘವೇಂದ್ರ ಗುರು ರಾಘವೇಂದ್ರ ಯತಿ ರಾಘವೇಂದ್ರ ಪ್ರಥಮ ಪ್ರಹ್ಲಾದ ವ್ಯಾಸ ಮುನಿಯೇ ಯತಿ ರಾಘವೇಂದ್ರ ಪತಿತೋಧಾರಿಯೇ ಪಾವನ ಕಾರಿಯೇ ಪತಿತೋಧಾರಿಯೇ ಪಾವನ ಕಾರಿಯೇ ಕರ ಮುಗಿವೆನು ದೊರೆಯೇ ಕ್ಷಿತಿಯೊಳು ಗೋಪಾಲ ವಿಠ್ಠಲನ ಸ್ಮರಿಸುತ ವಿಠ್ಠಲ ಗೋಪಾಲ ವಿಠ್ಠಲ ವಿಠ್ಠಲ ವಿಠ್ಠಲ ಕ್ಷಿತಿಯೊಳು ಗೋಪಾಲ ವಿಠ್ಠಲನ ಸ್ಮರಿಸುತ ಪ್ರತಿ ಮಂತ್ರಾಲಯದೊಳು ಅತಿ ಮೆರೆವ ರಥವನ್ನೇರಿದ ರಾಘವೇಂದ್ರ ಸದ್ಗುಣಗಣ ಸಾಂದ್ರ ರಥವನ್ನೇರಿದ ರಾಘವೇಂದ್ರ ಸತತ ಮಾರ್ಗದಿ ಸಂತತ ಸೇವಿಪರಿಗೆ ಸತತ ಮಾರ್ಗದಿ ಸಂತತ ಸೇವಿಪರಿಗೆ ಅತಿ ಹಿತದಲಿ ಮನೋ ರಥವ ಕೊಡುವೆ ನೆಂದು ರಥವನ್ನೇರಿದ ರಾಘವೇಂದ್ರ ಸದ್ಗುಣಗಣ ಸಾಂದ್ರ ರಥವನ್ನೇರಿದ ರಾಘವೇಂದ್ರ ಸದ್ಗುಣಗಣ ಸಾಂದ್ರ ಸದ್ಗುಣಗಣ ಸಾಂದ್ರ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ

Hyaṅge māḍalayya Kr̥ṣṇa hōgutide āyuṣya / ಹ್ಯಾಂಗೆ ಮಾಡಲಯ್ಯ ಕೃಷ್ಣ ಹೋಗುತಿದೆ ಆಯುಷ್ಯ

ಹ್ಯಾಂಗೆ ಮಾಡಲಯ್ಯ ಕೃಷ್ಣ ಹೋಗುತಿದೆ ಆಯುಷ್ಯ








ಹ್ಯಾಂಗೆ ಮಾಡಲಯ್ಯ ಕೃಷ್ಣ ಹೋಗುತಿದೆ ಆಯುಷ್ಯ

ಮಂಗಳಾಂಗ ಭವಭಂಗ  ಬಿಡಿಸಿ ನಿನ್ನ  ಡಿಂಗರಿಗನ  ಮಾಡೋ  ಅನಂಗಜನಕ ಯೇಸು ಜನುಮದ ಸುಕೃತದ  ಫಲವೋ  ತಾನು  ಜನಿಸಲಾಗಿ ಭೂಸುರದೇಹದ  ಜನುಮವು ಎನಗೆ  ಸಂಭವಿಸಿದೆಯಾಗಿ ಮೋದತೀರ್ಥ  ಮತ ಚಿಹ್ನಿತನಾಗದೆ  ದೋಷಕೆ  ಒಳಗಾಗಿ ಲೇಶಸಾಧನವ ಕಾಣದೆ ದುಃಸಹವಾಸದಿಂದಲೇ  ದಿನ ದಿನ ಕಳದೆ ಶಶಿಮುಖ ಕನಕದ ಆಶೆಗೆ ಬೆರೆತು  ವಸುಪತಿ ನಿನ್ನಡಿಯ ಹಸನಾಗಿ ನಿನ್ನ ನೆನೆಯದೆ  ಕೃಪೆಯ ಗಳಿಸದೆ ಕೆಟ್ಟೆನಯ್ಯ  ನಿಶೆಹಗಲು ಸ್ಥಿರವೆಂದು ತನುವನು ಪೋಷಿಸಲಾಶಿಸಿ  ಜೀಯ ಕುಸುರಿದೆ ನೆಲವೋ  ಸರ್ವಕಾಲ ನಿನ್  ಒಡೆತನವೆಂಬುವ  ಬಗೆಯನು ಅರಿಯದೆ ನೆರೆನಂಬಿದ  ಪಾವಟಿಗಳು ಎಲ್ಲಾ  ಸರಿದು ಹೋದವಲ್ಲಾ ಮರಳಿ ಈ ಪರಿಯ ಜನುಮವು ಬರುವ ಭರವಸೆಯಂತು  ಇಲ್ಲಾ ಪರಿಪರಿ ವಿಷಯದ ಆಶೆಯು ಎನಗೆ ಕಿರಿದು  ಆಯಿತಲ್ಲಾ ಹರಿಯೇ ಜಗದಿ ನೀನೊಬ್ಬನಲ್ಲದೆ ಪೊರೆವರಿನ್ನಾರು  ಇಲ್ಲವಲ್ಲಾ  ಅವನಿ ಒಳಗೆ ಪುಣ್ಯ ಕ್ಷೇತ್ರ ಚರಿಸುವ ಹವಣಿಕೆ ಎನಗಿಲ್ಲಾ ಪವನಾತ್ಮಕ  ಗುರು ಮಧ್ವ ಶಾಸ್ತ್ರದ ಪ್ರವಚನ ಕೇಳಲಿಲ್ಲಾ  ತವಕದಿಂದ ಗುರು ಹಿರಿಯರ ಸೇವಿಸಿ ಅವರ ಒಲಿಸಲಿಲ್ಲಾ ರವಿನಂದನ ಕೇಳಿದರ  ಉತ್ತರ ಕೊಡೆ ವಿವರಸರಕು ಒಂದಾದರು ಇಲ್ಲಾ  ಭಾಗವತರೊಡಗೂಡಿ ಉಪವಾಸ ಜಾಗರ ಒಂದುದಿನ ಮಾಡಲಿಲ್ಲಾ ರಾಗದಿ ಶುಕಮುನಿ ಪೇಳ್ದ ಹರಿಕಥೆ  ಸಂಯೋಗವೆಂಬೋದಿಲ್ಲಾ ನೀಗುವಂತ ಭವ ಭಯವ ಭಕುತಿ ವೈರಾಗ್ಯವೆಂಬೋದಿಲ್ಲಾ ಯೋಗಿವಂದ್ಯ  ಗೋಪಾಲವಿಠಲ.....ಗೋಪಾಲವಿಠಲ; ವಿಠಲ ವಿಠಲ ಗೋಪಾಲವಿಠಲ ಯೋಗಿವಂದ್ಯ  ಗೋಪಾಲವಿಠಲ ತಲೆ ಭಾಗಿ  ನಿನ್ನನೇ  ಬೇಡಿಕೊಂಬೆ

ರಚನೆ: ಶ್ರೀ ಗೋಪಾಲದಾಸರು

English Lyrics

Hyaṅge māḍalayya Kr̥ṣṇa hōgutide āyuṣya

Maṅgalāṅga bhavabhaṅga biḍisi ninna ḍiṅgarigana māḍō anaṅgajanaka

Yēsu janumada sukr̥tada phalavō tānu janisalāgi
Bhūsura dēhada janumavu enage sambhavisideyāgi

Mōdatīrtha mata cihnitanāgade dōṣake oḷagāgi
Lēśa sādhana kaṇade duḥsahavāsadindalē dina dina kaḷade

Śaśimukha kanakada āśege beretu vasupati ninnadiya
Hasanāgi ninna neneyade kr̥peya gaḷisade keṭṭenayya

Niśehagalu sthiravendu tanuvanu pōṣisālāśisi jīya
Kusuride nelavō sarvakāla nin oḍetanaveṁbuva bageyanu ariyade

Nerenambida pāvaṭigaḷu ellā saridu hōdavallā
Maraḷi ī pariya janumavu baruva bharavaseyaṁtu illā

Pari pari viṣayada āśeyu enage kiridu āyitallā
Hariyē jagadi nīnobbanallade porēvarinnāru illavallā

Avani oḷage puṇyakṣētra carisuva havaṇike enagillā
Pavanātmaka guru Madhva śāstrada pravacana kēḷalillā

Tavakadiṁda guru hiriya sevishi avara oli salillā
Ravinandana kēḷidara uttara koḍe vivarasaraku ondādarū illā

Bhāgavataroḍagūḍi upavāsa jāgara ondu dina māḍalillā
Rāgadi Śukamuni pēḷda Harikathe saṁyōgaveṁbōdillā

Nīguvanta bhava bhayava bhakti vairāgyaveṁbōdillā
Yōgivandya Gōpālavitthala... Gōpālavitthala; Vitthala Vitthala Gōpālavitthala

Yōgivandya Gōpālavitthala tale bhāgi ninnane bēḍikoṁbe

Composer : Sri Gopaladasru 

English Meaning

How do I manage, O Krishna, as life keeps slipping away?

Bless me, O Auspicious One, break the bonds of worldly life, and make me your child, O Creator of Love.

Is this life the reward of the virtuous deeds of Christ's birth, that I am born?
Or has the divine body of the earth brought me into existence?

Without the sacred mark of holy pilgrimage, I am trapped in sins.
Without even a glimpse of righteousness, I endure intolerable associations day by day.

Caught in the desires for the moon-faced golden dreams, I have wandered from your feet, O Lord.
I failed to think of you with devotion and could not earn your grace, thus ruining myself.

Day and night, thinking my life is eternal, I nourish this body and live on.
Unaware of this fragile earth and your eternal ownership over it, I live in ignorance.

All the debts and trusts I placed in others have been settled and gone.
There is no hope that such a life will come again after this existence.

The myriad desires of this world have grown insignificant to me.
O Hari, there is no protector for me but you in this world.

I have no yearning to wander within this sacred earth for virtuous deeds.
I have not listened to the teachings of Guru Madhva or the sacred scriptures.

I have not served my elders and teachers with dedication or earned their blessings.
Even when Ravinandana asked me for answers, I had no worthy offering to give.

I have not fasted or stayed awake a single night with the company of devotees.
I have not heard the Harikatha recited by the blessed sage Shuka.

I lack the devotion and renunciation needed to dispel the fears of worldly existence.
O Gopalavithala, worshipped by the yogis... Gopalavithala; Vithala Vithala Gopalavithala.

O Gopalavithala, revered by yogis, I bow my head and plead only to you.

https://www.youtube.com/watch?v=krJWKo-jrkY

Saturday, November 23, 2024

Prabhu Ramane Darshan Dyave / प्रभू रामाने दर्शन द्यावे

प्रभू रामाने दर्शन द्यावे








 

श्री राम श्री राम प्रभो राम।

श्री राम श्री राम प्रभो राम।

प्रभू रामाने दर्शन द्यावे गातो मुखी हरिनाम अंतरी माझ्या रात्रंदिन तो वास करिल श्रीराम || धृ || विलसे हाती धनुष्यबाण जवळी सीता आणि लक्ष्मण जोडुनी कर द्वय मारुती लीन असा दिसो मज राम अंतरी माझ्या रात्रंदिन तो वास करिल श्रीराम.. || १ || शब्द पित्याचे आज्ञा मानून कर्तव्याचे कठोर पालन आदर्श संसारी हे रामायण विनये करितो प्रणाम अंतरी माझ्या रात्रंदिन तो वास करिल श्रीराम.. || २ ||

English Lyrics

Sri Ram Sri Ram Prabho Sri Ram

Prabhu Ramane Darshan Dyave
Gato Mukhi Harinam
Antari Majhya Ratrandin To
Vas Karil Shri Ram || Dhruv ||

Vilase Hati Dhanushyaban
Javali Sita Ani Lakshman
Joduni Kar Dvaya Maruti Lin
Asa Diso Maj Ram
Antari Majhya Ratrandin To
Vas Karil Shri Ram.. || 1 ||

Shabda Pityache Aagna Manun
Kartavyache Kathor Palan
Aadarsh Sansari He Ramayan
Vinaye Karito Pranam
Antari Majhya Ratrandin To
Vas Karil Shri Ram.. || 2 ||

English Meaning

May Lord Rama appear before me,
Chanting the holy name with my lips.
May He dwell in my heart, day and night,
May Lord Shri Rama reside forever. || Chorus ||

He appears holding a bow and arrow,
With Sita and Lakshmana beside Him.
With folded hands, Hanuman devotedly leans,
This is how I wish to see Lord Rama.
May He dwell in my heart, day and night,
May Lord Shri Rama reside forever. || 1 ||

Obeying His father's words,
Fulfilling His duty with utmost resolve.
An ideal family man as depicted in the Ramayana,
I bow down with reverence to Him.
May He dwell in my heart, day and night,
May Lord Shri Rama reside forever. || 2 ||

https://www.youtube.com/watch?v=Si1s-lHgim8





Monday, November 18, 2024

Prathama Daivave / ಪ್ರಥಮ ದೈವವೇ ಪಂಢರಿರೇಯಾ

ಪ್ರಥಮ ದೈವವೇ ಪಂಢರಿರೇಯಾ









ಪ್ರಥಮ ದೈವವೇ ಪಂಢರಿರೇಯಾ
ಪೃಥ್ವಿಯೊಳಗೆ ಭಾಗೀರಥಿಗೆ 
ಪಥವ ತೋರೋ ಪ

ಸಕಲಭಯನಾಶ ಸಾತ್ವಿಕ ಮೂರುತಿ
ಭಕ್ತಜನಪೋಷಕ ನೀನಲ್ಲವೆ
ತ್ವಕ್ಕು ಇಂದ್ರಿಯಗಳು ನಿನ್ನಾಧೀನವೋ
ಅಖಿಳ ಬಗೆಯಿಂದ ಮಾತು ಮನ್ನಿಸಿ ಕಾಯೊ || 1||

ಸರ್ವರಂತರಿಯ ಸಿದ್ಧ ಫಲದಾಯಕ
ಸರ್ವರಲಿ ಸ್ವಾಮಿಯೆಂದೆನಿಪ
ಸರ್ವ ವಿಘ್ನೋಪ ಶಾಂತಾ ವೇದಾಂತನೆ
ಗೀರ್ವಾಣ ಮುನಿಸುತ ಗಿರಿಧರ ದೇವಾ ||2||

ಸಾಧು ಮೂರುತಿ ಸಿದ್ಧ ಫಲದಾ
ಬೋಧ ಕೀರುತಿ ಆದಿಪರಬೊಮ್ಮ
ವಿಜಯವಿಠ್ಠಲರೇಯಾ ನೀನು
ಈ ಜಗದೊಳು ಭೀಮಾ ತೀರ ನಿವಾಸಾ ||3||

ಶ್ರೀ ವಿಜಯದಾಸರ ಕೃತಿ

English Lyrics

Prathama Daivave Pandharireya
Prithviyolage Bhagirathige Pathava Toro Pa

Sakala Bhaya Naasha Saathvika Moorthi
Bhakta Janaposhaka Neenallave
Tvakku Indriyagalu Ninnadheenavo
Akhila Bageyinda Maathu Mannisi Kaayo (1)

Sarvaranthariya Siddha Phaladaayaka
Sarvarali Swami Yendeneepa
Sarva Vighnopa Shaanta Vedanthane
Geervana Munisuta Giridhara Devaa (2)

Saadhu Moorthi Siddha Phaladaa
Bodha Keeruthi Aadiparabomma
Vijaya Vitthalareya Neenu
Ee Jagadolu Bheema Teera Nivaasaa (3)

Composed By Sri Vijayadasaru

English Meaning

O Primary Deity, Lord of Pandharipur!
Grant a path to the Bhagirathi (Ganga) on this earth.

Destroyer of all fears, the purest form,
Protector of devotees, is it not You?
The skin and senses are under Your command,
With utmost devotion, grant our prayers and protect us. (1)

The one who resides in all beings, fulfiller of desires,
Renowned as the Lord among all,
Remover of all obstacles, O Vedantic one,
The Lord worshipped by the celestial sages, Giridhara Deva! (2)

O sacred form, giver of spiritual knowledge,
Proclaimer of wisdom, the primordial God,
O Victorious Vitthala, it is You
Who resides in this world as the dweller on the banks of the Bhima River (3)


This song is a devotional composition by Vijayadasa, expressing deep reverence for Lord Vitthala of Pandharipur, who is celebrated as the ultimate protector, remover of fears, and bestower of spiritual and worldly blessings. It praises His divine qualities and seeks His guidance and grace


https://www.youtube.com/watch?v=0skAf2L8YtQ

Friday, November 15, 2024

Kaada beladingalu / ಕಾಡ ಬೆಳದಿಂಗಳು

ಕಾಡ ಬೆಳದಿಂಗಳು








ಕಾಡ ಬೆಳದಿಂಗಳು | ಈ ಸಂಸಾರ | ಕತ್ತಲೆ ಬೆಳದಿಂಗಳು ||ಪ||

ಉಂಟಾದ ಕಾಲಕ್ಕೆ ನೆಂಟರು ಇಷ್ಟರು
ಬಂಟರಾಗಿ ಬಂದು ಬಾಗಿಲ ಕಾಯ್ವರು |
ಉಂಟಾದತನ ತಪ್ಪಿ ಬಡತನ ಬಂದರೆ
ಒಂಟೆಯಂತೆ ಕತ್ತ ಮೇಲಕ್ಕೆ ಎತ್ತುವರು ||೧||

ಏರುವ ದಂಡಿಗೆ ನೂರಾಳು ಮಂದಿಯು
ಮೂರು ದಿನದ ಭಾಗ್ಯ ಝಣಝಣವು |
ನೂರಾರುಸಾವಿರ ದಂಡವ ತೆತ್ತರೆ
ರಂಗವಿಠ್ಠಲನೇ ಸರಿಯೆಂಬೊರಯ್ಯ ||೨||

ಸಾಹಿತ್ಯ : ಶ್ರೀಪಾದರಾಜರು

Lyrics in English

Kaada beladingalu ee samsara|.
Kattale beladingalu ||

Untaada kaalakke nentaru eshtaru|
bantaraagi bandu baagila kaivaru||
untaadatana tappi badatana bandare
onteyante kattu melakke ettuvaro || kaada Bela||

Eruva dandige nooraalu mandiyu
mooru dinada bhagya janajanavu ||
nooraaru savira dandava tettare
ranga vittallanne sariyemburayya || kaada ||

Composer : shripaadaraajaru

English Meaning

Forest Moonlight | This world | Moonlight in darkness ||P||

When times are good, countless friends gather,
They come as helpers, standing guard at the door.
But when prosperity fades and poverty strikes,
They turn away, leaving you like an abandoned soul. ||1||

For a short-lived position, a hundred people assemble,
Celebrating the fleeting glory for just three days.
Yet when debts of countless rupees must be repaid,
Only Lord Rangaviththala remains the ultimate savior. ||2||

https://www.youtube.com/watch?v=5DU3z4DJwug&t=1s

Tuesday, November 12, 2024

Ramanamavembo namava / ರಾಮನಾಮವೆಂಬೋ ನಾಮವ ನೆನೆದರೆ

ರಾಮನಾಮವೆಂಬೋ ನಾಮವ ನೆನೆದರೆ

ರಾಮನಾಮವೆಂಬೋ ನಾಮವ ನೆನೆದರೆ ಭಯವಿಲ್ಲ ಮನಕೆ
ಮೂರು ಲೋಕಕೆ ಕಾರಣ ಕರ್ತಾ ನಾರಾಯಣ ಜಗಕೆ ಶ್ರೀಮನ್ ನಾರಾಯಣ ಜಗಕೆ || PA ||

ಮತ್ಸ್ಯಾವತಾರವ ತಾಳಿದ ರಾಮ ವೇದವ ತರುವದಕೆ |
ಬೆತ್ತವ ಬೆನ್ನಲಿ ಪೊಟ್ಟಿದ ರಾಮ ಕೂರ್ಮಾವತಾರಕ್ಕೆ || 1 ||

ಭೂಮಿಯ ಪೊಟ್ಟು ನೀರೊಳು ಮುಳುಗಿದ ವರಾಹವತಾರಕ್ಕೆ |
ಕರುಳನು ಬಗೆದು ಮಾಲೆಯ ಧರಿಸಿದ ಪ್ರಹ್ಲಾದನಸಲಹುದಕೆ || 2 ||

ಭೂಮಿಯದಾನವ ಬೇಡಿದ ರಾಮ ವಾಮನವತಾರಕ್ಕೆ |
ತಾಯಿಯ ಶಿರವನು ಅಳಿದನು ರಾಮ ಭಾರ್ಗವತಾರಕ್ಕೆ || 3 ||

ವನವಾಸವ ಮಾಡಿದ ರಾಮ ಜನಕನ ವಾಕ್ಯಕ್ಕೆ |
ಮಾವ ಕಂಸನ ಕೊಂದನು ಕೃಷ್ಣ ತಾಯಿಯ ಬಿಡಿಸಲಿಕ್ಕೆ || 4 ||

ಸತಿಯರ ವ್ರತಗಳ ಕೆಡಿಸಿದ ರಾಮ ತ್ರಿಪುರರ ಸಲಹುದಕ್ಕೆ |
ವಾಹನ ಬಿಟ್ಟು ತುರಗವ ನೇರಿದ ಕಲ್ಯವತಾರಕ್ಕೆ || 5 ||

ಶ್ಯಾಮಲ ವರ್ಣವ ತಾಳಿದ ರಾಮ ಸಾಮರ್ಥ್ಯನು ಜಗಕೆ |
ಸ್ವಾಮಿ ಶ್ರೀ ಪುರಂದರ ವಿಠಲನು ರಾಮ ಗೋವಿಂದನು ಜಗಕೆ || 6 ||

ಕೃತಿ:  ಶ್ರೀ ಪುರಂದರದಾಸರು

English Lyrics

Ramanamavembo naamava nenedare bhayavilla manake
Mooru loka ke kaarana karta Narayana jagake, Shreeman Narayana jagake || PA ||

Matsya avatara taalida Raama vedava taruvadake
Betta bennaali pottida Raama koormavatara ke || 1 ||

Bhoomiya pottu neerolu mulugida Varaahavatara ke
Karulanu bage du maale ya dharisi Prahlaadanasalahudake || 2 ||

Bhoomiyadana be dida Raama Vaanavavataaraka
Taayiya shiravanu alidanu Raama Bhaargavavataaraka || 3 ||

Vanavaasava maadida Raama Janakanna vaakya ke
Maava Kamsana konda nu KrishNa taayiya bidi sa likke || 4 ||

Satijara vratagala kedisida Raama Tripurara salahudake
Vaahana bittu turagava nerida Kalyavatara ke || 5 ||

Shaamala varna taalida Raama saamarthya nu jagake
Swaami Shri Purandara Vithalanu Raama Govindanu jagake || 6 ||

Author : Sri Puradaradasaru

English Meaning

1. The name of Rama, when remembered, removes all fear from the mind.
He is the cause of the three worlds, the Creator, Narayana, and the Lord of the universe, Sriman Narayana.

2. Rama, who took the Matsya (fish) avatar, brought the Vedas to the world.
He, who in his Kurma (tortoise) avatar, carried the mountain on his back.

3. Rama, in his Varaha (boar) avatar, rescued the Earth from the ocean.
He, in his Narsimha (man-lion) avatar, destroyed the demon Hiranyakashipu and protected Prahlada.

4. Rama, in his Vamana (dwarf) avatar, asked for three paces of land and conquered the world.
In his Bhargava (Brahmin) avatar, he killed the demon Ravana to free his mother from grief.

5. Rama, who undertook exile, kept the words of King Janaka.
Krishna, who killed Kamsa, freed his mother from her troubles.

6. Rama, who broke the vows of Sati (devoted women) in his battle against the demon Tripura.
The Lord, who left his chariot and rode on horseback, in his Kalyavatara (auspicious form).

7. The dark-hued Rama, who possesses immense power, is the Lord of the world.
He is the Lord, Shri Purandara Vithala, and Rama, the Govinda of the universe.

This verse highlights various avatars (incarnations) of Lord Vishnu and his divine actions in each, offering protection, fulfilling promises, and restoring balance in the world. It concludes with a praise of Lord Vishnu as Purandara Vithala and Govinda.


https://www.youtube.com/watch?v=v9iDEzp-c4I&t=11s


ಈಶ ನಿನ್ನ ಚರಣ ಭಜನೆ ಆಶೆಯಿಂದ

ಈಶ ನಿನ್ನ ಚರಣ ಭಜನೆ 








ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನುದೋಷ ರಾಶಿ ನಾಶ ಮಾಡು ಶ್ರೀಶ ಕೇಶವ

ಶರಣು ಹೊಕ್ಕೆನಯ್ಯ ಎನ್ನ ಮರಣ ಸಮಯದಲ್ಲಿ ನಿನ್ನಚರಣ ಸ್ಮರಣೆ ಕರುಣಿಸಯ್ಯ ನಾರಾಯಣ||1||

ಶೋಧಿಸೆನ್ನ ಭವದ ಕಲುಷ ಬೋಧಿಸಯ್ಯ ಜ್ಞಾನವೆನಗೆಬಾಧಿಸುವಾ ಯಮನ ಬಾಧೆ ಬಿಡಿಸು ಮಾಧವ|| 2||

ಹಿಂದನೇಕ ಯೋನಿಗಳಲಿ ಬಂದು ಬಂದು ನೊಂದೆ ನಾನುಇಂದು ಭವದ ಬಂಧ ಬಿಡಿಸು ತಂದೆ ಗೋವಿಂದನೆ ||3||

ಭ್ರಷ್ಟನೆನಿಸ ಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆಶಿಷ್ಟರೊಳಗೆ ಇಟ್ಟು ಕಷ್ಟ ಬಿಡಿಸು ವಿಷ್ಣುವೆ ||4||

ಮೊದಲು ನಿನ್ನ ಪಾದ ಪೂಜೆ ಮುದದಿ ಗೈವೆನಯ್ಯ ನಾನುಹೃದಯದೊಳಗೆ ಒದಗಿಸಯ್ಯ ಮಧುಸೂದನ ||5||

ಕವಿದುಕೊಂಡು ಇರುವ ಪಾಪ ಸವೆದು ಹೋಗುವಂತೆ ಜವನ ಬಾಧೆಯನ್ನು ಬಿಡಿಸೊ ಘನ ತ್ರಿವಿಕ್ರಮ ||6||

ಕಾಮಜನಕ ನಿನ್ನ ನಾಮ ಪ್ರೇಮದಿಂದ ಪಾಡುವಂಥನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ ||7||

ಮದನನಯ್ಯ ನಿನ್ನ ಮಹಿಮೆ ವದನದಲ್ಲಿ ಇರುವ ಹಾಗೆಹೃದಯದಲ್ಲಿ ಸದನ ಮಾಡು ಮುದದಿ ಶ್ರೀಧರ ||8||

ಹುಸಿಯನಾಡಿ ಹೊಟ್ಟೆ ಹೊರೆವ ವಿಷಯದಲ್ಲಿ ರಸಿಕನೆಂದುಹುಸಿಗೆ ನನ್ನ ಹಾಕದಿರೋ ಹೃಷಿಕೇಶನೆ ||9||

ಅಬ್ಧಿಯೊಳಗೆ ಬಿದ್ದು ನಾನು ಒದ್ದುಕೊಂಬೆನಯ್ಯ ಭವದಿಗೆದ್ದು ಪೋಪ ಬುದ್ಧಿ ತೋರೊ ಪದ್ಮನಾಭನೆ||10||

ಕಾಮಕ್ರೋಧ ಬಿಡಿಸಿ ನಿನ್ನ ನಾಮ ಜಿಹ್ವೆಯೊಳಗೆ ನುಡಿಸುಶ್ರೀಮಹಾನುಭಾವನಾದ ದಾಮೋದರ ||11||

ಪಂಕಜಾಕ್ಷ ನೀನು ಎನ್ನ ಮಂಕುಬುದ್ಧಿ ಬಿಡಿಸಿ ನಿನ್ನಕಿಂಕರನ್ನ ಮಾಡಿಕೊಳ್ಳೊ ಸಂಕರುಷಣ||12||

ಏಸು ಜನ್ಮ ಬಂದರೇನು ದಾಸನಲ್ಲವೇನೊ ನಿನ್ನಘಾಸಿ ಮಾಡದಿರೋ ಎನ್ನ ವಾಸುದೇವನೆ ||13||

ಬುದ್ಧಿ ಶೂನ್ಯನಾಗಿ ನಾನು ಕದ್ದ ಕಳ್ಳನಾದೆನಯ್ಯತಿದ್ದಿ ಹೃದಯ ಶುದ್ಧಿ ಮಾಡೊ ಪ್ರದ್ಯುಮ್ನನೆ ||14||

ಜನನಿ ಜನಕ ನೀನೆ ಎಂದು ಎನುವೆನಯ್ಯ ದೀನಬಂಧುಎನಗೆ ಮುಕ್ತಿ ಪಾಲಿಸಿಂದು ಅನಿರುದ್ಧನೆ ||15||

ಹರುಷದಿಂದ ನಿನ್ನ ನಾಮ ಸ್ಮರಿಸುವಂತೆ ಮಾಡು ನೇಮಇರಿಸು ನಿನ್ನ ಚರಣದಲ್ಲಿ  ಪುರುಷೋತ್ತಮ ||16||

ಸಾಧು ಸಂಗ ಕೊಟ್ಟು ನಿನ್ನ ಪಾದಭಜಕನೆನಿಸು ಎನ್ನಭೇದ ಮಾಡಿ ನೋಡದಿರೋ ಅಧೋಕ್ಷಜ ||17||

ಚಾರುಚರಣ ತೋರಿ ಎನಗೆ ಪಾರುಗಾಣಿಸಯ್ಯ ಕೊನೆಗೆಭಾರ ಹಾಕಿ ಇರುವೆ ನಿನಗೆ ನಾರಸಿಂಹನೆ ||18||

ಸಂಚಿತಾರ್ಥ ಪಾಪಗಳನು ಕಿಂಚಿತಾದರುಳಿಯದಂತೆ ಮುಂಚಿತಾಗಿ ಕಳೆದು ಪೊರೆಯೊ ಸ್ವಾಮಿ ಅಚ್ಯುತ||19||

ಜ್ಞಾನ ಭಕ್ತಿ ಕೊಟ್ಟು ನಿನ್ನ ಧ್ಯಾನದಲ್ಲಿ ಇಟ್ಟು ಎನ್ನಹೀನ ಬುದ್ಧಿ ಬಿಡಿಸೊ ಮುನ್ನ ಜನಾರ್ದನ ||20||

ಜಪತಪಾನುಷ್ಠಾನ ನೀನು ಒಪ್ಪುವಂತೆ ಮಾಡಲಿಲ್ಲತಪ್ಪ ಕೋಟಿ ಕ್ಷಮಿಸಬೇಕು ಉಪೇಂದ್ರನೆ ||21||

ಮೊರೆಯನಿಡುವೆನಯ್ಯ ನಿನಗೆ ಸೆರೆಯ ಬಿಡಿಸು ಭವದ ಎನಗೆಇರಿಸು ಭಕ್ತರೊಳಗೆ ಪರಮಪುರುಷ ಶ್ರೀಹರೇ||22||

ಪುಟ್ಟಿಸಲೇ ಬೇಡವಿನ್ನು ಪುಟ್ಟಿಸಿದಕೆ ಪಾಲಿಸಿನ್ನುಇಷ್ಟು ಬೇಡಿಕೊಂಬೆ ನಾನು ಶ್ರೀಕೃಷ್ಣನೆ||23||


Saturday, November 9, 2024

Nambide ninna padava / ನಂಬಿದೆ ನಿನ್ನ ಪಾದವ

ನಂಬಿದೆ ನಿನ್ನ ಪಾದವ, ವೆಂಕಟರಮಣ









ನಂಬಿದೆ ನಿನ್ನ ಪಾದವ, ವೆಂಕಟರಮಣ

ನಂಬಿದೆ ನಿನ್ನ ಪಾದವ ||ಪ||
ನಂಬಿದೆ ನಿನ್ನ ಪಾದಾಂಬುಜಯುಗಳವ
ಚಂದದಿ ಸಲಹೋ ಮಂದರಧರನೆ ||ಅ||

ತಂದೆಯು ನೀನೇ ತಾಯಿಯು ನೀನೇ
ಬಂಧುಬಳಗವು ನೀನೆ
ಬಂದ ದುರಿತವೆಲ್ಲ ಹೊಂದಿಕೊಳ್ಳದಂತೆ
ಬಂದೆನ್ನ ಸಲಹೋ ಮುಕುಂದಮುರಾರಿ ||

ಚಿಕ್ಕಂದು ಮೊದಲು ನಾನು ನಿನ್ನಯ ಪಾದ
ಹೊಕ್ಕು ಜೀವಿಸುತಿಹೆನು
ಘಕ್ಕನೆ ಜ್ಞಾನವ ಅಕ್ಕರದಿಂದಲೆ ಕೊಡು
ಮಕ್ಕಳ ಮಾಣಿಕ್ಯ ರುಕ್ಮಿಣಿಯರಸ ||

ಮರೆತು ಮಾಯದೊಳು ಮುಳುಗಿದೆ ಮಾಯ-
ವರಿತು ಅರಿಯದಾದೆ
ಮರೆಯದೆ ಎನ್ನನು ಸಲಹೊ ಕೃಪಾನಿಧಿ
ವರದ ಶ್ರೀವೆಂಕಟ ಪುರಂದರವಿಠಲ ||

ಶ್ರೀ ಪುರಂದರದಾಸರ ಕೃತಿ

Lyrics in English

Nambide ninna padava venkataramana nambide ninna padava ||

Nambide ninna padambuja yugalava chandadi salaho mandaradharane ||

Tandeyu nine tayiyu nine bandhu balagavu neene |
Banda duritagalella hondikolladante bandenna salaho mukunda murari ||

Chikkandu modalu naanu ninnaya paada hokku jeevisutihenu ||ghakkane jnanava akkaradindale kodu makkala manikya rukminiyarasa ||

Maretu mayadolu mulugide maya varitu ariyadade | mareyade
ennanu salaho kripanidhi varada shri venkata purandara vittala ||

Composed by Sri Puradaradasaru

English Meaning

I have placed my trust in Your divine feet, Venkataramana, I have placed my trust in Your divine feet.

I have placed my trust in Your divine lotus feet, which shine like the moon and are praised by the celestial beings, the ones who carry the Mandara Mountain.

You are my father, You are my mother, You are my friend and protector; You are the one who removes all my miseries and blesses me, O Mukunda Murari.

At first, I was foolish and did not follow Your sacred feet, but now, I realize that living without You is meaningless.
Grant me wisdom, O Lord, like the precious pearls of your devotees, like the jewels of Rukmini's love.

I was lost in the illusions of life, unknowingly trapped in its worldly charms, but now, I am not confused anymore.
I will forever sing Your praises, O Lord of mercy, the giver of boons, Shri Venkataramana, Purandara Vittala.

https://www.youtube.com/watch?v=kpzVMtJFO64

Saturday, November 2, 2024

Baa madhava yadunandana / ಬಾ ಮಾಧವ ಯದುನಂದನಾ

ಬಾ ಮಾಧವ ಯದುನಂದನಾ








ಬಾ ಮಾಧವ ಯದುನಂದನಾ | ಪೊರೆಯೋ ಘನಾ….ಆ…

ರಮಾರಮಣ ವೆಂಕಟರಮಣಾ…ಆ…

ಬಾ ಮಾಧವ ಯದುನಂದನ| ಪೊರೆಯೋ ಘನಾ ರಮಾರಮಣ | ಪೊರೆಯೋ ಘನಾ ವೆಂಕಟರಮಣಾ…
||ಬಾ ಮಾಧವ||

ಭವಭಯಹಾರಿ ಗೋವಿಂದಾಹರಿ| ಶಂಖಚಕ್ರಧಾರಿ ವಿಭಾಶಿ ಹರಿ ||ಬಾ ಮಾಧವ||

ಕರುಣಾಕರ ಶಿವಾಭಯಂಕರ| ವೆಂಕಟೇಶ್ವರ ತುಳಸಿ ಮಾಲಾಧರ||ಬಾ ಮಾಧವ||

ನೀ ಕರುಣಿಸೋ ನಿನ್ನ ಧ್ಯಾನಂಗಳ | ನೀ ತೋರಿಸೋ ನಿನ್ನ ಪಾದಂಗಳಾ…ಆ… | ಹೇ ವಿಠ್ಠಲಾ… ವಿಠ್ಠಲಾ… ವಿಠ್ಠಲಾ… ವಿಠ್ಠಲಾ… ವಿಠ್ಠಲಾ… ವಿಠ್ಠಲಾ | ವಿಠ್ಠಲಾ ವಿಠ್ಠಲಾ ವಿಠ್ಠಲಾ…
ನೀ ಕರುಣಿಸೋ ನಿನ್ನ ಧ್ಯಾನಂಗಳ | ನೀ ತೋರಿಸೋ ನಿನ್ನ ಪಾದಂಗಳಾ…||ಬಾ ಮಾಧವ||

Lyrics in English

Baa madhava yadunandana | poreyo ghana a … ramaaramana venkataramanaa …a ………|

Baa madhava yadunandana | poreyo ghana a … ramaaramana venkataramanaa …a ………|| baa madhava||

Bhavabhayahari govindaahari | shankhachakradhari vibhashi hari || baa madhava ||

Karunakara shivabhayankara | venkateshwara tulasi maladhara || baa madhava ||

Nee karuniso ninna dhyaanangala | nee toriso ninna paadangala … a … | he vittalaa … vittalaa …. vittalaa … vittalaa ….vittalaa … vittalaa | vittalaa … vittalaa vittala …|| nee karuniso ninna dhyaanangala | nee toriso ninna padangala || baa madhava ||

Anjaneya swami / ಆಂಜನೇಯ ಸ್ವಾಮೀ

ಆಂಜನೇಯ ಸ್ವಾಮೀ ಸತತ ಭಜನೆ ನಿರತ


ಆಂಜನೇಯ ಸ್ವಾಮೀ ಸತತ ಭಜನೆ ನಿರತ

ಆತ್ಮಾರಾಮನು ನೀ ಸೀತಾಪತಿ ದೂತ||

ಸಾಗರ ತರಣ ,ರಿಪುಗಳ ಹರಣ
ಸಜ್ಜನ ಭರಣ ನಮೋ ನಮೋ
ವಾನರ ಪ್ರವರ ವಜ್ರ ಶರೀರ
ಪವನ ಕುಮಾರ ನಮೋ ನಮೋ||1||
||ಆಂಜನೇಯ ಸ್ವಾಮೀ||

ಲಕ್ಷ್ಮಣ ಪಾಲಕ ಲಂಕಾ ದಹಕ
ಜಾನಕಿ ಮೋಹಕ ನಮೋ ನಮೋ
ಸಂವಿತ್ ಸಾಧಕ ಪ್ರೇರಕ ಸೇವಕ
ಆದರ್ಶಾತ್ಮಕ ನಮೋ ನಮೋ||2||
||ಆಂಜನೇಯ ಸ್ವಾಮೀ||

ಕಪಿಗಣ ಸೇವಿತ , ತರುಣಾರಾಧಿತ
ಕವಿವರ ಸೂಸಿಪ ನಮೋ ನಮೋ
ಬುಧ್ಧಿ ಮತಾಂವರ ಸಿಧ್ಧಿವರಾಕರ
ಸಂವಿತ್ ಸುಂದರ ನಮೋ ನಮೋ||3||
||ಆಂಜನೇಯ ಸ್ವಾಮೀ||

Lyrics in English

Anjaneya swami satata bhajane niruta aatmaraamanu nee seetapati doota ||2||

Saagara tarana ripugala harana ||2|| sajjana bharana namo namo ||2|| vaanara pravara vajra sharira ||2|| pavana kumara namo namo ||2|| anjaneya swaami ||

Lakshmana palaka lankaa dahanakaa ||2|| janaki mohaka namo namo ||2|| samvith saadhaka preraka sevaka ||2|| adarshaatmaka namo namo ||2|| Anjaneya swami||

Kapigana sevita, tarunaaraadhita ||2|| kavivara soosipa namo namo ||2|| budhi mataamvara sidhivaraakara ||2|| samvith sundara namo namo ||2|| Anjaneya swami||





He Shivanandana | ಹೇ ಶಿವನಂದನ ಹೇ ಶಿವನಂದನ

📜 Original Kannada Lyrics: ಹೇ ಶಿವನಂದನ ಹೇ ಶಿವನಂದನ ಹೇ ಗಿರಿಜಾಸುತೆ ಹೇ ಗಿರಿಜಾಸುತೆ ವಿಘ್ನವಿನಾಶಕ ಪಾಲಯಮಾಂ ಪಾರ್ವತೀಚ ನಂದನ ಮೋರಯಾ ಗಜಾನನ ಗಜವದನ ವಿಘ್ನವಿನಾಶ...