Sunday, January 5, 2025

BhajisuBidadeGurunathana / ಭಜಿಸು ಬಿಡದೆ ಗುರುನಾಥನ

ಭಜಿಸು ಬಿಡದೆ ಗುರುನಾಥನ










ಭಜಿಸು ಬಿಡದೆ ಗುರುನಾಥನ ಭಜಿಸು ಬಿಡದೆ ಗುರುನಾಥನ । ನೀ । ತ್ಯಜಿಸಲೋ ಎರಡೆಂಬ ಮಾತನಾ ।। ಹಿಂದು ಮುಂದು ಕಾಣದೆಮ್ಮ । ಬಂಧನವ ಬಿಡಿಸಿ ನಿತ್ಯಾ- ನಂದವ ತೋರಿದ ನಿಜದಾತನಾ ।। ನೀ ಭಜಿಸು ।। ನಿಜವನರಿಯದಿರಲು ಪುಟ್ಟಿ । ಅಜನ ಸೃಷ್ಟಿಯಿಂದ ಬಂದ ರುಜೆಯ ಕೆಡಿಸಿದ ಪರಮಾತ್ಮನಾ ।। ನೀ ಭಜಿಸು ।। ಅಲ್ಲಿ ಇಲ್ಲಿ ಎಂಬ ಸೊಲ್ಲ । ಸುಳ್ಳು ಮಾಡಿ ಪುಣ್ಯ ಪಾಪ- ವಿಲ್ಲದಂತೆ ಗೈದ ಮಾಯಾತೀತನಾ ।। ನೀ ಭಜಿಸು ।। ತೋರಿಕೆಡುವೋ ದೃಶ್ಯವನ್ನು ಮೀರಲಿಚ್ಛೆಯುಳ್ಳ ಅಧಿ - ಕಾರಿ ಪುಣ್ಯ ಪುರುಷ ಪಾರಿಜಾತನಾ ।। ನೀ ಭಜಿಸು ।। ಶಂಕೆಯನ್ನು ಹರಿಸಿ ಗುರು ಶಂಕರಾರ್ಯನೆನಿಸಿ ಜನ್ಮ ಸಂಕಟವ ಕೆಡಿಸಿದಮಳಾತ್ಮನಾ ।। ನೀ ಭಜಿಸು ।। #BhajisuBidadeGurunathana #Sringeri #Jagadguru #Bharathitirtha #Mahasannidhanam Source - Dakshinamnaya Sri Sharada Peetham, Sringeri
Rendered by: Smt. Sharada Ramanan, Smt.Bharati & Smt.Roopa Shashidhara
Salutations at the Lotus feet of His Holiness Jagadguru Shankaracharya


https://www.youtube.com/watch?v=ogTCZq74Bzs

No comments:

Post a Comment

Tirtha Vitthala | तीर्थ विठ्ठल, क्षेत्र विठ्ठल

📜 Original Marathi Lyrics: तीर्थ विठ्ठल, क्षेत्र विठ्ठल । देव विठ्ठल, देवपूजा विठ्ठल ॥१॥ माता विठ्ठल, पिता विठ्ठल । बंधु विठ्ठल, गोत्र विठ्...