Sunday, December 10, 2023

daari yavudayya vaikuntake / ದಾರಿ ಯಾವುದಯ್ಯ ವೈಕುಂಠಕೆ

ದಾರಿ ಯಾವುದಯ್ಯ ವೈಕುಂಠಕೆ 












ದಾಸನಾಗುವುದಕ್ಕೆ ಏಸೇಸು ಜನ್ಮದ ಸುಕೃತ

ರವಿಕೋಟಿ ಭಾಸುರ, ಶ್ರೀಶ ಸುಗುಣವಂತ
ನಾಶರಹಿತ ನಿನ್ನ ದಾಸರ ದಾಸ್ಯವ
ಲೇಸಾಗಿ ಕೊಡುಕಂಡ್ಯ ಪುರಂದರವಿಠಲ

ದಾರಿ ಯಾವುದಯ್ಯ ವೈಕುಂಠಕೆ ದಾರಿ ತೋರಿಸಯ್ಯಾ ಪ
ದಾರಿ ಯಾವುದಯ್ಯಾ ದಾರಿ ತೋರಿಸು ಆಧಾರ ಮೂರುತಿ ನಿನ್ನ ಪಾದ ಸೇರುವುದಕ್ಕೆ ಅ.ಪ

ಬಲುಭವದನುಭವದಿ ಕತ್ತಲೆಯೊಳು ಬಲು ಅಂಜುತೆ ನಡುಗಿ ||
ಬಳಲುತ ತಿರುಗಿದೆ ದಾರಿಯ ಕಾಣದೆ ಹೊಳೆಯುವ ದಾರಿಯ ತೋರೊ ನಾರಾಯಣ 1

ಪಾಪವ ಪೂರ್ವದಲಿ ಮಾಡಿದುದಕೆ ಲೇಪವಾಗಿರೆ ಕರ್ಮ
ಈ ಪರಿಯಿಂದಲಿ ನಿನ್ನ ನೆನೆಸಿಕೊಂಬೆ ಶ್ರೀಪತಿ ಸಲಹೆನ್ನ ಭೂಪ ನಾರಾಯಣ 2

ಇನ್ನು ನಾ ಜನಿಸಲಾರೆ ಭೂಮಿಯ ಮೇಲೆ ನಿನ್ನ ದಾಸನಾದೆನೊ||
ಪನ್ನಗಶಯನ ಶ್ರೀ ಪುರಂದರ ವಿಠಲ ಇನ್ನು ಪುಟ್ಟಿಸದಿರೊ ಎನ್ನ ನಾರಾಯಣ 3

Youtube Link


No comments:

Post a Comment

Tirtha Vitthala | तीर्थ विठ्ठल, क्षेत्र विठ्ठल

📜 Original Marathi Lyrics: तीर्थ विठ्ठल, क्षेत्र विठ्ठल । देव विठ्ठल, देवपूजा विठ्ठल ॥१॥ माता विठ्ठल, पिता विठ्ठल । बंधु विठ्ठल, गोत्र विठ्...