Thursday, April 6, 2023

Veera hanuma Bahu Parakrama / ವೀರ ಹನುಮ ಬಹು ಪರಾಕ್ರಮ

ವೀರ ಹನುಮ ಬಹು ಪರಾಕ್ರಮ








ವೀರ ಹನುಮ ಬಹು ಪರಾಕ್ರಮ ||ಪ||

ಸಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ ||ಅ.ಪ||

ರಾಮ ದೂತನೆನಿಸಿ ಕೊಂಡೆ ನೀ, ರಾಕ್ಷಸರ
ವನವನೆಲ್ಲ ಕಿತ್ತು ಬಂದೆ ನೀ
ಜಾನಕಿಗೆ ಮುದ್ರೆಯಿತ್ತು ಜಗತಿಗೆಲ್ಲ ಹರ್ಷವಿತ್ತು
ಚೂಡಾಮಣಿಯ ರಾಮಗಿತ್ತು ಲೋಕಕೆ ಮುದ್ದೆನಿಸಿ ಮೆರೆವ ||

ಗೋಪಿಸುತನ ಪಾದ ಪೂಜಿಸಿ , ಗದೆಯ ಧರಿಸಿ
ಬಕಾಸುರನ ಸಂಹರಿಸಿದೆ ನೀ
ದ್ರೌಪದಿಯ ಮೊರೆಯ ಕೇಳಿ ಮತ್ತೆ ಕೀಚಕನ್ನ ಕೊಂದು
ಭೀಮನೆಂಬ ನಾಮ ಧರಿಸಿ ಸಂಗ್ರಾಮ ಧೀರನಾಗಿ ಜಗದಿ ||

ಮಧ್ಯಗೇಹನಲ್ಲಿ ಜನಿಸಿ ನೀ ಬಾಲ್ಯದಲ್ಲಿ
ಮಸ್ಕರೀಯ ರೂಪಗೊಂಡೆ ನೀ
ಸತ್ಯವತಿಯ ಸುತನ ಭಜಿಸಿ ಸನ್ಮುಖದಿ ಭಾಷ್ಯ ಮಾಡಿ
ಸಜ್ಜನರ ಪೊರೆವ ಮುದ್ದು ಪುರಂದರವಿಠಲನ ದಾಸ ||

https://www.youtube.com/watch?v=0ZkXb



KXQ174&list=RD0ZkXbKXQ174&start_radio=1

No comments:

Post a Comment

He Shivanandana | ಹೇ ಶಿವನಂದನ ಹೇ ಶಿವನಂದನ

📜 Original Kannada Lyrics: ಹೇ ಶಿವನಂದನ ಹೇ ಶಿವನಂದನ ಹೇ ಗಿರಿಜಾಸುತೆ ಹೇ ಗಿರಿಜಾಸುತೆ ವಿಘ್ನವಿನಾಶಕ ಪಾಲಯಮಾಂ ಪಾರ್ವತೀಚ ನಂದನ ಮೋರಯಾ ಗಜಾನನ ಗಜವದನ ವಿಘ್ನವಿನಾಶ...