A beautiful kanakadasa krithi
ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ…
ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ…
ತಾಯಿ ತಂದೆಯ ಬಿಟ್ಟು ತಪವಮಾಡಲುಬಹುದು..
ದಾಯಾದಿ ಬಂಧುಗಳ ಬಿಡಲುಬಹುದು..
ರಾಯ ತಾ ಮುನಿದರೆ ರಾಜ್ಯವನೆ ಬಿಡಬಹುದು…
ಕಾಯಜಾಪಿತನಿನ್ನಡಿಯ ಬಿಡಲಾಗದು.. ಬಿಡಲಾಗದು… ಬಿಡಲಾಗದು…
ಒಡಲು ಹಸಿಯಲು ಅನ್ನವಿಲ್ಲದೆಲೆ ಇರಬಹುದು….
ಪಡೆದ ಕ್ಷೇತ್ರವಬಿಟ್ಟು ಹೊರಡಬಹುದು..
ಮಡದಿ ಮಕ್ಕಳ ಕಡೆಗೆ ತೊಲಗಿಸಿಯೇ ಬಿಡಬಹುದು…
ಕಡಲೊಡೆಯ ನಿನ್ನಡಿಯ ಘಳಿಗೆ ಬಿಡಲಾಗದು… ಬಿಡಲಾಗದು.. ಬಿಡಲಾಗದು…
ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದು..
ಮಾನದಲಿ ಮನವ ತಗ್ಗಿಸಲುಬಹುದು..
ಪ್ರಾಣನಾಯಕನಾದ ಆದಿ ಕೇಶವರಾಯ
ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು… ಬಿಡಲಾಗದು.. ಬಿಡಲಾಗದು….
No comments:
Post a Comment