Wednesday, July 13, 2022

Rama Manoharane Deena / ರಮಾ ಮನೋಹರನೆ ದೀನ

A Beautiful Jagannatha Dasara Krithi

ರಮಾ ಮನೋಹರನೆ ದೀನ ಪತಿತಪಾವನಾ 

ರಮಾಮನೋಹರನೆ ದೀನ-
ಪತಿತಪಾವನಾ ||ಪ||

ಚೆಂದದಿಂದ ವೇದ ತಂದ
ಮಂದರೋದ್ಧರಾ ಅರ-
ವಿಂದನಯನ ಬಂದು ರಕ್ಷಿಸೋ
ಇಂದು ಭೂಧರಾ ||೧||

ಕರುಳಮಾಲೆ ಧರಿಸಿದ ಶ್ರೀ-
ವರದ ವಾಮನಾಧೃತ
ಕರದ ಪರಶುರಾಮ ರಾಘವ
ಯದುಕುಲೋತ್ತಮಾ ||೨||

ಲೋಕ ಮೋಹಕ ಬುದ್ಧನಾಗಿ
ತೇಜಿಯೇರಿದಾ ಜಗ
ದೇಕ ಜಗನ್ನಾಥ ವಿಠಲ
ಭೀಕರಾಂತಕಾ ||3||

ರಾಗ - ಬಿಲಹರಿ(ಭೈರವಿ) ರೂಪಕತಾಳ (ದಾದರಾ)

No comments:

Post a Comment

He Shivanandana | ಹೇ ಶಿವನಂದನ ಹೇ ಶಿವನಂದನ

📜 Original Kannada Lyrics: ಹೇ ಶಿವನಂದನ ಹೇ ಶಿವನಂದನ ಹೇ ಗಿರಿಜಾಸುತೆ ಹೇ ಗಿರಿಜಾಸುತೆ ವಿಘ್ನವಿನಾಶಕ ಪಾಲಯಮಾಂ ಪಾರ್ವತೀಚ ನಂದನ ಮೋರಯಾ ಗಜಾನನ ಗಜವದನ ವಿಘ್ನವಿನಾಶ...